Friday, September 23, 2016

ಜಪಾನ್ ನಲ್ಲಿ ಪ್ರಬಲ ಭೂಕಂಪನ; ಸುನಾಮಿ ಭೀತಿ ಇಲ್ಲ ಎಂದ ಹವಾಮಾನ ಇಲಾಖೆ!

Earthquake of 6.4 magnitude hits Japan; tsunami threat ruled out 
ಟೋಕಿಯೋ: ಜಪಾನ್ ನ ಪೂರ್ವ ಕರಾವಳಿ ಭಾಗದಲ್ಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ದಾಖಲಾಗಿದೆ.ಪೂರ್ವ ಜಪಾನ್ ನ ಕಟ್ಸೂರಾ ನಗರದಲ್ಲಿ ಬೆಳಗ್ಗೆ ಸುಮಾರು 9.14ರ ವೇಳೆಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.  ಭೂಕಂಪನ ಬಳಿಕ ಸಂಭವಿಸಿದ ಉಪಕಂಪನ ಕೂಡ ಪ್ರಬಲವಾಗಿದ್ದು, 6.5ರಷ್ಟು ತೀವ್ರತೆ ದಾಖಲಾಗಿದೆ ಎಂದು ಜಪಾನ್ ಹವಮಾನ ಇಲಾಖೆ ಹೇಳಿದೆ. ಆದರೆ ಈ ಪ್ರಬಲ ಕಂಪನದಿಂದ  ಸುನಾಮಿ ಭೀತಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಇಲಾಖೆ, ಉಪಕಂಪನಗಳಿಂದ ಭೀತಿಗೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.ಇನ್ನು ಭೂಕಂಪನದಿಂದಾಗಿ ಕಟ್ಸೂರಾ ನಗರದ ಕೆಲ ಬಹುಮಹಡಿ ಕಟ್ಟಡಗಳಿಗೆ ಹಾನಿಯಾದ ಕುರಿತು ಮಾಹಿತಿ ಕೇಳಿಬಂದಿದೆಯಾದರೂ, ಸಾವು-ನೋವಿನ ಕುರಿತು ಯಾವುದೇ ರೀತಿಯ  ವರದಿಗಳು ಬಂದಿಲ್ಲ. ಇದೇ ಜಪಾನ್ ಈಶಾನ್ಯ ಕರಾವಳಿಯಲ್ಲಿ 2011ರ ಮಾರ್ಚ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಸಂಭವಿಸಿದ ಸುನಾಮಿಯಿಂದಾಗಿ ಸುಮಾರು 18 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.
 
http://www.kannadaprabha.com/world/earthquake-of-6-4-magnitude-hits-japan-tsunami-threat-ruled-out/282472.html
You may also like:

No comments :

Post a Comment